|
ದೇಶದಲ್ಲಿ ಒಂದು ಲಕ್ಷ ಮೆಗಾ ವ್ಯಾಟ್ ಸೌರ ಯೋಜನೆಗಳ ಅಭಿವೃದ್ಧಿಯನ್ನು ಸಾಧಿಸಲು ಸೌರ ಉದ್ಯಾನಗಳನ್ನೂ ಮತ್ತು ಅತಿ ದೊಡ್ಡ ಸೌರ ವಿದ್ಯುತ್ ಯೋಜನೆಗಳ ಅಭಿವೃದ್ದಿಗೆ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ ಪ್ರಸ್ತಾಪಿಸಿದೆ.
ಈ ಯೋಜನೆಯಡಿ ಕರ್ನಾಟಕದಲ್ಲಿ ಸೌರ ಉದ್ಯಾನಗಳ ಅಭಿವೃದ್ಧಿಗಾಗಿ ಕ್ರೆಡೆಲ್ ಮತ್ತು ಎಸ್.ಇ.ಸಿ.ಐ. ಯಿಂದ ಮೆ|| ಕರ್ನಾಟಕ ಸೌರ ಶಕ್ತಿ ಅಭಿವೃದ್ಧಿ ನಿಗಮ ನಿಯಮಿತ ಎನ್ನುವ ಒಂದು ಜಂಟಿ ಸಹಭಾಗಿತ್ವದ ಕಂಪನಿಯನ್ನು ಸ್ಥಾಪಿಸಲಾಗಿದೆ. ಈ ಉದ್ದೇಶಕ್ಕಾಗಿ ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಸುಮಾರು 13000 ಎಕರೆ ಜಮೀನನ್ನು ಗುರುತಿಸಲಾಗಿದೆ.
ಕರ್ನಾಟಕ ಸರ್ಕಾರದ ಗೆಜೆಟ್ ಅಧಿಸೂಚನೆಗಳ ಪ್ರಕಾರ ಪಾವಗಡದಲ್ಲಿ 2000 ಮೆ.ವ್ಯಾ. ಸಾಮರ್ಥ್ಯದ ಸೌರ ಉದ್ಯಾನವನ್ನು ಅಭಿವೃದ್ಧಿಪಡಿಸಲು ವಾರ್ಷಿಕ ಭೋಗ್ಯ ಬಾಡಿಗೆ ಆಧಾರದ ಮೇಲೆ ಸುಮಾರು 13000 ಎಕರೆಗಳಷ್ಟು ಅಗತ್ಯವಿರುವ ಜಮೀನನ್ನು ಪಡೆದುಕೊಳ್ಳಲು ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತವು ಜಮೀನು ಮಾಲೀಕರೊಂದಿಗೆ ಭೋಗ್ಯ ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ.
ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯದ ಮಾರ್ಗಸೂಚಿಗಳ ಪ್ರಕಾರ ಸೌರ ವಿದ್ಯುತ್ ಉದ್ಯಾನ ಅಭಿವೃದ್ಧಿದಾರರಾದ ಕೆಎಸ್ಪಿಡಿಸಿಎಲ್ 2000 ಮೆ.ವ್ಯಾ. ಪಾವಗಡ ಸೌರ ಉದ್ಯಾನಕ್ಕೆ ಪ್ಲಗ್ ಆಂಡ್ ಪ್ಲೇ ಮಾದರಿಯಲ್ಲಿ ಸೌರ ವಿದ್ಯುತ್ ಅಭಿವೃದ್ಧಿಗಾರರು ಉತ್ಪಾದಿಸಿದ ವಿದ್ಯುತ್ ರವಾನಿಸುವುದಕ್ಕಾಗಿ ಆಂತರಿಕ ಮೂಲಸೌಕರ್ಯ ಕಾಮಗಾರಿಗಳಾದ ಸಂಪರ್ಕ ರಸ್ತೆಗಳು, ಬೀದಿ ದೀಪಗಳು, ಒಳಚರಂಡಿ, ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಸೃಜಿಸುವುದಕ್ಕಾಗಿ ನಿಯೋಜಿತವಾಗಿದೆ.
ಸೌರ ಉದ್ಯಾನವು ಸುಮಾರು 250 ಮೆ.ವ್ಯಾ.ಸಾಮಥ್ರ್ಯವಿರುವ 8 ವಿಭಾಗಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. 220/66ಕೆ.ವಿ. ಹಾಗೂ 220/33ಕೆ.ವಿ. ಗಳ ಒಂದು ಉಪ-ವಿದ್ಯುತ್ ವಿತರಣಾ ಕೇಂದ್ರ ವನ್ನು ಪ್ರತಿ 250 ಮೆ.ವ್ಯಾ. ವಿಭಾಗಕ್ಕೆ ಉತ್ಪಾದಿತ ಸೌರ ಶಕ್ತಿಯ ಸಾಗಣೆಗೆ ಪ್ರಸ್ತಾಪಿಸಲಾಗಿದೆ. 250 ಮೆ.ವ್ಯಾ. ವಿಭಾಗಗಳನ್ನು 50 ಮೆ.ವ್ಯಾ. ಸಾಮಥ್ರ್ಯವಿರುವ ಪ್ರತಿ 5 ಬ್ಲಾಕುಗಳನ್ನಾಗಿ ಉಪವಿಭಾಗಿಸಲಾಗಿದೆ. ಪ್ರತಿ 50 ಮೆಗಾವ್ಯಾಟ್ ಬ್ಲಾಕು ಮೊದಲು 220/66ಕೆವಿ ಅಥವಾ 220/33ಕೆವಿ ಡಬಲ್ ಸಕ್ರ್ಯೂಟ್ನ ಭೂಗತ ಮಾರ್ಗದ ಕೇಬಲ್ಗಳ ಮೂಲಕ ಉಪ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸತಕ್ಕದ್ದು. 220/66ಕೆ.ವಿ ಅಥವಾ 220/33ಕೆ.ವಿ ಉಪಕೇಂದ್ರದಿಂದ 400ಕೆ.ವಿ./220ಕೆ.ವಿ. ಪಿ.ಜಿ.ಸಿ.ಐ.ಎಲ್. ವಿತರಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಿದ್ದು ಅಲ್ಲಿ 400 ಕೆ.ವಿ. ವರೆಗೂ ಏರಿಸಲಾಗುತ್ತದೆ. ನಂತರ, 400ಕೆ.ವಿ./220ಕೆ.ವಿ. ಸಾಮಥ್ರ್ಯದ ಪಿ.ಜಿ.ಸಿ.ಐ.ಎಲ್. ವಿದ್ಯುತ್ ವಿತರಣಾ ಕೇಂದ್ರವನ್ನು ತುಮಕೂರಿನ ವಸಂತನರಸಾಪುರದಲ್ಲಿರುವ 765ಕೆವಿ/400ಕೆವಿ ಪಿಜಿಸಿಐಎಲ್ ವಿತರಣಾ ಕೇಂದ್ರಕ್ಕೆ ಮತ್ತು ಆಂಧ್ರಪ್ರದೇಶದ ಗುತ್ತಿ ಯಲ್ಲಿರುವ 400/220ಕೆ.ವಿ. ಉಪ-ವಿತರಣಾ ಕೇಂದ್ರದೊಂದಿಗೆ ಸಂಪರ್ಕ ಕಲ್ಪಿಸಲಾಗುವುದು.
ಇಡೀ ಪಾವಗಡ ಸೌರ ಉದ್ಯಾನವನ್ನು ತಲಾ 50ಮೆ.ವ್ಯಾ.ನ 40 ಬ್ಲಾಕುಗಳನ್ನಾಗಿ ವಿಭಾಗಿಸಲಾಗಿದೆ. ಪಾವಗಡ ಸೌರ ಉದ್ಯಾನದಲ್ಲಿ ಹಂಚಿಕೆ ಮಾಡಲಾದ ನಿವೇಶನ ಈ ಕೆಳಗಿನಂತಿದೆ:
ಯೋಜನೆ
|
ಮೆ.ವ್ಯಾ.ಗಳಲ್ಲಿ ಸಾಮಥ್ರ್ಯ
|
ಜೆಎನ್ಎನ್ಎಸ್ಎಂ ಅಡಿ ಎನ್ಟಿಪಿಸಿ
|
600
|
ವಿಜಿಎಫ್ ಅಡಿ ಎಸ್ಇಸಿಐ
|
200
|
ಕೆ.ಆರ್.ಇ.ಡಿ.ಎಲ್.
|
1200
|
ಸೌರ ಉದ್ಯಾನದಲ್ಲಿ ಉತ್ಪಾದಿಸಿದ ವಿದ್ಯುತ್ ಅನ್ನು ಕೇಂದ್ರ ಗ್ರಿಡ್ಗೆ ರವಾನಿಸಲು ಅನುಮತಿ ನೀಡುವಂತೆ ಕೋರಿ ಸೌರ ವಿದ್ಯುತ್ ಅಭಿವೃದ್ಧಿಗಾರರ ಪರವಾಗಿ ಕೆ.ಎಸ್.ಪಿ.ಡಿ.ಸಿ.ಎಲ್. ಸಂಸ್ಥೆಯು ಎಲ್.ಟಿ.ಎ. ಮತ್ತು ಗ್ರಿಡ್ ಕನೆಕ್ಟಿವಿಟಿ ಅರ್ಜಿಗಳನ್ನು ಮೆ|| ಪವರ್ಗ್ರಿಡ್ ಸಂಸ್ಥೆಗೆ ಸಲ್ಲಿಸಿದೆ. ಪವರ್ ಗ್ರಿಡ್ ದಿನಾಂಕ: 11.04.2016ರ ಪತ್ರದಲ್ಲ್ಲಿ ಕೆ.ಎಸ್.ಪಿ.ಡಿ.ಸಿ.ಎಲ್.ಗೆ ಎಲ್ಟಿಎ ಮತ್ತು ಗ್ರಿಡ್ ಕನೆಕ್ಟಿವಿಟಿ ಅನುಮೋದನೆಯನ್ನು ನೀಡಿದೆ.
ಎನ್.ಟಿ.ಪಿ.ಸಿ. ಸಂಸ್ಥೆಯು ಜೆ.ಎನ್.ಎನ್.ಎಸ್.ಎಂ. ಯೋಜನೆಯಡಿ ಪಾವಗಡ ಸೌರ ಉಧ್ಯಾನದಲ್ಲಿ 600 ಮೆ.ವ್ಯಾ ಸಾಮಥ್ರ್ಯದ ಸೌರ ವಿದ್ಯುತ್ ಉತ್ಪಾದನಾ ಸಾಮಥ್ರ್ಯವನ್ನು ಸ್ಥಾಪಿಸಲು (ಮುಕ್ತ ವರ್ಗದಡಿ 500ಮೆ.ವ್ಯಾ. ಡಿ.ಸಿ.ಆರ್. ವರ್ಗದಡಿ 100 ಮೆ.ವ್ಯಾ.) ಈ ಕೆಳಗಿನ ಬಿಡ್ಡುದಾರರಿಂದ ಹಿಮ್ಮುಖ ಹರಾಜು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಟೆಂಡರುಗಳನ್ನು ಅಂತಿಮಗೊಳಿಸಿದೆ:
ಸಂಸ್ಥೆಯ ಹೆಸರು
|
ಮೆ.ವ್ಯಾ.ಗಳಲ್ಲಿ ಸಾಮಥ್ರ್ಯ
|
ಮೆ|| ಯರ್ರೋ ಇನ್ಫ್ರಾಸ್ಟ್ರಕ್ಷರ್ ಲಿಮಿಟೆಡ್
|
50
|
ಮೆ|| ಪರಮಪೂಜ್ಯ ಸೋಲಾರ್ ಎನರ್ಜಿ ಪ್ರೈ.ಲಿ.
|
150
|
ಮೆ|| ಫೋರ್ಟಂ ಫಿನ್ಸೂರ್ಯ ಎನರ್ಜಿ ಪ್ರೈ.ಲಿ.
|
100
|
ಮೆ|| ACME ರೆವಾರಿ ಸೋಲಾರ್ ಪವರ್ ಪ್ರೈ ಲಿ. ಮತ್ತು
ಮೆ|| ACME ಕುರುಕ್ಷೇತ್ರ ಸೋಲಾರ್ ಎನರ್ಜಿ ಪ್ರೈ.ಲಿ.
|
100
|
ಮೆ|| ರಿನ್ಯೂ ವಿಂಡ್ ಎನರ್ಜಿ (ಟಿ.ಎನ್.2) ಪ್ರೈ.ಲಿ.
|
50
|
ಮೆ|| ಟಾಟಾ ಪವರ್ ರಿನಿವೇಬಲ್ ಎನರ್ಜಿ ಲಿ.
|
150
|
ಮೇಲಿನ 600 ಮೆ.ವ್ಯಾ. ಸೌರ ವಿದ್ಯುತ್ ಉತ್ಪಾದನೆಯ ಪೈಕಿ, 450 ಮೆ.ವ್ಯಾ. ಡಿಸೆಂಬರ್ 2017ರಲ್ಲಿ ಮತ್ತು 150 ಮೆ.ವ್ಯಾ. ಜನವರಿ 2018 ರಲ್ಲಿ ಕಾರ್ಯಾರಂಭವಾಗಿದೆ.
ಕರ್ನಾಟಕದ ವಿದ್ಯುತ್ ವಿತರಣಾ ಕಂಪನಿಗಳು ಜೆ.ಎನ್.ಎನ್.ಎಸ್.ಎಂ. ಯೋಜನೆಯ 600 ಮೆ.ವ್ಯಾ. ಸಾಮಥ್ರ್ಯದ ಫಲಾನುಭವಿಗಳಾಗಿರುತ್ತಾರೆ ಮತ್ತು ಕೆ.ಆರ್.ಇ.ಡಿ.ಎಲ್. ಆಹ್ವಾನಿಸಿರುವ ಬಾಕಿ ಸಾಮಥ್ರ್ಯವಾದ 1200 ಮೆ.ವ್ಯಾ ನಲ್ಲಿ 400 ಮೆವ್ಯಾ ಕಾರ್ಯರಂಭಗೊಂಡಿದ್ದು ಇನ್ನೂ 800 ಮೆವ್ಯಾ ಕಾರ್ಯಾರಂಭಗೊಳ್ಳಬೇಕಾಗಿದೆ.
ಪಾವಗಡ ಸೌರ ಉದ್ಯಾನದ 2000 ಮೆ.ವ್ಯಾ. ನಿಂದ ಬಾಕಿ 200 ಮೆ.ವ್ಯಾ. ಸೌರ ವಿದ್ಯುತ್ ಅಭಿವೃದ್ಧಿಗಾರರಿಂದ ಎಸ್.ಇ.ಸಿ.ಐ. ಮುಖಾಂತರ ಕಾರ್ಯಾರಂಭಗೊಳ್ಳಬೇಕಾಗಿದೆ.
ಪಾವಗಡ ಸೌರ ಉದ್ಯಾನದಿಂದ ಉತ್ಪಾದಿಸಲಾಗುವ 2000ಮೆ.ವ್ಯಾ. ಜೂನ್ 2019ರೊಳಗೆ ಗ್ರಿಡ್ಗೆ ಸೇರಿಸಲಾಗುವುದು.
ಕೆ.ಎಸ್.ಪಿ.ಡಿ.ಸಿ.ಎಲ್., ಸೌರ ಉದ್ಯಾನ ಅಭಿವೃದ್ಧಿಗಾರರಾಗಿ, ಈ ಕೆಳಗಿನ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಪ್ರಾರಂಭಿಸಿದೆ.
ವಿವರಗಳು
|
ಕಾಮಗಾರಿ ಈ ಕೆಳಗಿನವರಿಗೆ ವಹಿಸಲಾಗಿದೆ.
|
2x150 ಎಂ.ವಿ.ಎ. 220/66ಕೆ.ವಿ. ಯ ನಾಲ್ಕು ವಿತರಣಾ ಕೇಂದ್ರಗಳನ್ನು ಸ್ಥಾಪಿಸುವುದು.
|
ಮೆ|| ಎಲ್&ಟಿ ಲಿಮಿಟೆಡ್
|
4x80 ಎಂ.ವಿ.ಎ. 220/33ಕೆ.ವಿ.ಯ ನಾಲ್ಕು ವಿತರಣಾ ಕೇಂದ್ರಗಳನ್ನು ಸ್ಥಾಪಿಸುವುದು.
|
ಮೆ|| ಅಮರರಾಜಾ ಪವರ್ ಸಿಸ್ಟಮ್ಸ್ ಲಿಮಿಟೆಡ್
|
2x8 ಎಂ.ವಿ.ಎ. 66/11ಕೆ.ವಿ. ಯ ವಿತರಣಾ ಕೇಂದ್ರ ಸ್ಥಾಪಿಸುವುದು.
|
ಮೆ||ವಿಜಿ ಪವರ್ Transformers ಪ್ರೈವೆಟ್ ಲಿಮಿಟೆಡ್
|
75 ಕಿ.ಮಿ.ಗಳ ಉದ್ದದ ರಸ್ತೆಗಳನ್ನು ನಿರ್ಮಿಸುವುದು.
|
ಮೆ|| ಕೆ.ಎಂ.ಸಿ. ಕಾನ್ಸ್ಟ್ರಕ್ಷನ್ಸ್ ಲಿಮಿಟೆಡ್
|
ರಸ್ತೆಗಳ ಉದ್ದಕ್ಕೂ ಬೀದಿ ದೀಪಗಳನ್ನು ಒದಗಿಸುವುದು ಮತ್ತು 220 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳಿಗೆ ಆಕ್ಸಿಲರಿ ವಿದ್ಯುತ್ ಒದಗಿಸುವುದು.
|
ಮೆ|| ಕುಮಾರ ಎಲೆಕ್ಟ್ರಿಕಲ್ಸ್
|
೧೧ಕೆ.ವಿ ಸ್ಥಳಾಂತರಿಸುವುದು, ಕಿತ್ತುಹಾಕುವುದು, ಮತ್ತು ಡಿ.ಟಿ.ಸಿ. ಮರುವ್ಯವಸ್ಥೆಗೊಳಿಸುವುದು ಮತ್ತು ಟರ್ನ್ಕೀ ಆಧಾರದ ಮೇಲೆ ಪಾವಗಡದ ೨೦೦೦ ಮೆ.ವ್ಯಾ. ಸೌರ ಉದ್ಯಾನವನ ಮೂಲಕ ಹಾದು ಹೋಗುವ ಗ್ರಾಮಗಳಾದ ರಾಯಚೆರ್ಲು ಮತ್ತು ತಿರುಮಣಿ ಗ್ರಾಮಗಳಲ್ಲಿ ನೀರಾವರಿ ಪಂಪುಸೆಟ್ಟುಗಳಿಗೆ ವಿದ್ಯುತ್ ಸರಬರಾಜು ವ್ಯವಸ್ಥೆಮಾಡುವುದು.
|
ಶ್ರೀ ಭಾಗ್ಯ ಎಲೆಕ್ಟ್ರಿಕಲ್ಸ್
|
ಪಾವಗಡ ಸೌರ ಉದ್ಯಾನ, ಪಾವಗಡದ 11 ಕೆ.ವಿ. ಉಲ್ಲೇಖ ಹೊಂದಿರುವ 220ಕೆ.ವಿ./66ಕೆ.ವಿ. ಮತ್ತು 66/11ಕೆ.ವಿ. ಉಪ-ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುವುದು.
|
ಶ್ರೀ ಮಾನಸ ಎಂಟರ್ಪ್ರೈಸಸ್
|
ಒಪ್ಪಂದದ ಆಧಾರದ ಮೇಲೆ ಮಾನವಶಕ್ತಿ ಸೇವೆಗಳ ನೇಮಕ
|
ಮೆ|| ಯೆಸ್ 24 ಗಾರ್ಡಿಂಗ್ & ಫೆಸಿಲಿಟಿ ಪ್ರೈ.ಲಿ.
|
|
|
|
|
|
|
|